Wednesday 25 June 2014

ವಾಚನಾ ವಾರಾಚರಣೆ ಜಿಲ್ಲಾಮಟ್ಟದ ಸಮಾರೋಪ ಸಮಾರೋಪ ಸಮಾರಂಭ
ಶೇಣಿ ಜೂನ್ 25: ಕೇರಳ ಗ್ರಂಥ ಶಾಲಾ ಸ್ಥಾಪಕ ಪಿ.ಎನ್ ಪಣಿಕ್ಕರ್ ರವರ ದಿನಾಚರಣೆಯನ್ನು ವಾಚನಾ ವಾರಾಚರಣೆಯಾಗಿ ಕೇರಳದುದ್ದಕ್ಕೂ ಆಚರಿಸಲಾಗುತ್ತದೆ. ಜೂನ್ 19ರಂದು ತೃಕ್ಕರಿಪ್ಪುರ ಸರಕಾರಿ ಪ್ರೌಢಶಾಲೆಯಲ್ಲಿ ಉದ್ಘಾಟನೆಗೊಂಡ ಜಿಲ್ಲಾ ಮಟ್ಟದ ಕಾರ್ಯಕ್ರಮದ ಸಮಾರೋಪ ಸಮಾರಂಭವು ಜೂನ್ 25ರಂದು ಶೇಣಿ ಶ್ರೀ ಶಾರಾದಾಂಬಾ ಪ್ರೌಢಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಜೆ.ಎಸ್ ಸೋಮಶೇಖರ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನ್ಯಾಯವಾದಿ ಶ್ರೀಮತಿ ಪಿ.ಪಿ ಶ್ಯಾಮಲಾದೇವಿ ಅವರು ಉದ್ಘಾಟಿಸಿದರು.ನಂತರ ಶೇಣಿ ಶಾಲಾ ಮಕ್ಕಳ ಸಾಹಿತ್ಯ ಸಂಗ್ರಹವಾದ "ಸಾಹಿತ್ಯ ಮಂಥನ" ವನ್ನು ಬಿಡುಗಡೆಗೊಳಿಸಿದರು. ಕಾಸರಗೋಡು ಜಿಲ್ಲಾ ಮಾಹಿತಿ ಅಧಿಕಾರಿ ಶ್ರೀ ಅಬ್ದುಲ್ ರಹಿಮಾನ್ ಅವರು ಪಿ.ಎನ್ ಪಣಿಕ್ಕರ್ ಸಂಸ್ಮರಣ ಭಾಷಣ ಮಾಡಿದರು.
ಖ್ಯಾತ ಸಾಹಿತಿ, ಪತ್ರಕರ್ತ ಹರೀಶ ಪೆರ್ಲ ಉಪನ್ಯಾಸ ನೀಡಿದರು.ಸಮಾರಂಭದಲ್ಲಿ ರಾಜ್ಯ ಅಧ್ಯಾಪಕ ಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀಮತಿ ರಮಾಬಾಯಿ ಟೀಚರ್, ಶಂಕರ ಕಾಮತ್ ಚೇವಾರು ಹಾಗೂ ಶೇಣಿ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಶಾರದಾ ವೈ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.ಸಮಾರಂಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಆಯಿಷಾ ಎ., ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ರೈ ಮಾಸ್ಟರ್, ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಸದಾಶಿವ ನಾಯಕ್, ಪ್ರೊ. . ಶ್ರೀನಾಥ್ , ಪಿ.ಕೆ ಕುಮಾರನ್ ನಾಯರ್, ಕೆ.ವಿ ರಾಘವನ್ ,ಪ್ರೌಢಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಬಿ.ಪಿ ಶೇಣಿ, ಯು.ಪಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ನಾಯಕ್, ಎ೦.ಪಿ.ಟಿ.ಎ ಅಧ್ಯಕ್ಷೆ ಸರ್ಪಿನ, ಯು.ಪಿ ಶಾಲಾ ಮುಖ್ಯೋಪಾಧ್ಯಾಯಿನಿ ಸೆಲಿನ್ ಮಚಾದೊ ಮುಂತಾದವರು ಭಾಗವಹಿಸಿ ಮಾತನಾಡಿದರು.ಜಿಲ್ಲಾ ಮಟ್ಟದ ಸ್ಪರ್ಧಾವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ತಂಬಾಕು ವಿರುದ್ಧ ಆಂದೋಲನದ ಭಾಗವಾಗಿ ಶಾಲಾ ಮಕ್ಕಳು ತಯಾರಿಸಿದ ವಿವಿಧ ಭಿತ್ತಿ ಪತ್ರಗಳು, ಲೇಖನಗಳು,ಶಾಲಾ ಲೈಬ್ರರಿ ಪುಸ್ತಕಗಳ ಸಂಗ್ರಹದ ಪ್ರದರ್ಶನವನ್ನು ವೀಕ್ಷಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ,ಜಿಲ್ಲಾ ಮಾಹಿತಿ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದರು. ನಿವೃತ್ತ ದೈಹಿಕ ಶಿಕ್ಷಕ ಕುಂಚಿನಡ್ಕ ಶಂಕರ ಪ್ರಸಾದ್ ಅವರ ವಾರ್ತಾಪತ್ರಿಕೆಗಳ ಸಂಗ್ರಹದ ಪ್ರದರ್ಶನವು ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.ವಿವಿಧ ದೇಶಗಳ,ವಿವಿಧ ಪ್ರಾಂತ್ಯಗಳ,ವಿವಿಧ ಭಾಷೆಗಳ ಸುಮಾರು 3500 ರಷ್ಟು ಪತ್ರಿಕೆಗಳ ಸಂಗ್ರಹ ಇವರ ಬಳಿ ಇದೆ.
ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್ ಸ್ವಾಗತಿಸಿ ಅಧ್ಯಾಪಕ ಚಿದಾನಂದ ಭಟ್ ವಂದಿಸಿದರು.ಅಧ್ಯಾಪಕ ಶಾಸ್ತಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

No comments: