Friday, 14 November 2014

CELEBRATION OF CHILDREN'S DAY

ಶೇಣಿ: ತಾರೀಕು 14-11-2014 ಜವಹರ್ ಲಾಲ್ ನೆಹರೂ ಅವರ ಜನ್ಮ ದಿನವಾದ ನವೆಂಬರ್ 14 ರಂದು ನಮ್ಮ ಶಾಲೆಯಲ್ಲಿ ಶಿಶು ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯೋಪಾಧ್ಯಾಯರಾದ ಶ್ರೀಯುತ ಶ್ರೀ ರವೀಂದ್ರನಾಥ ನಾಯಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು .ಹಿರಿಯ ಅಧ್ಯಾಪಕ ಶ್ರೀ ಮನೋಹರನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಶಾಲಾ ವಿದ್ಯಾರ್ಥಿ ನಾಯಕಿ ಅಖಿಲ ಸ್ವಾಗತಿಸಿ ಫಾತಿಮತ್ ಶಾಹಿನ ಧನ್ಯವಾದ ಸಮರ್ಪಣೆ ಮಾಡಿದರು.


ಅಧ್ಯಾಪಕಿಯರಾದ ಶ್ರೀಜ, ಸಜಿತ ಮತ್ತು ಸುಜಿತ ಅವರು ನೆಹರೂರವರ ಜೀವನ ಚರಿತ್ರೆ, ಸ್ವಾತಂತ್ರ್ಯ ಸಮರದಲ್ಲಿ ಅವರು ವಹಿಸಿದ ಪಾತ್ರ , ಮಕ್ಕಳಲ್ಲಿ ಅವರಿಗಿದ್ದ ಪ್ರೀತಿ ಎಂಬೀ ವಿಚಾರಗಳ ಕುರಿತು ಮಕ್ಕಳಿಗೆ ತಿಳಿಸಿ ಜವಹರ್ ಲಾಲ್ ಅವರ ಜನ್ಮದಿನವನ್ನು ಶಿಶುದಿನವಾಗಿ ಆಚರಿಸುತ್ತೇವೆ ಎಂದು ತಿಳಿಯಪಡಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭಾಷಣ ಸ್ಫರ್ಧೆ ಜರಗಿತು. ಭಾಷಣ ಸ್ಫರ್ಧೆಯಲ್ಲಿ ಫಾತಿಮತ್ ಅಸ್ನ ಪ್ರಥಮ ಸ್ಥಾನವನ್ನೂ ಅಖಿಲ ದ್ವಿತೀಯ ಸ್ಥಾನವನ್ನೂ ಪಡೆದರು.


No comments: