Monday, 24 November 2014

ಮಕ್ಕಳ ದಿನಾಚರಣೆ


 ಗೆಳೆಯರೇ  ಗೆಳೆಯರೇ ಕೇಳಿರಿ ನಾವೊಂದೇ
 ಸ್ನೇಹದ ಗೂಡಲಿ ನಮ್ಮ ಬಾಳೊಂದೇ
 ಕಲಿಯಿರಿ ನಲಿಯಿರಿ ಮುಂದಿನ ಪೀಳಿಗೆಗೆ 
 ಪ್ರಜಾಪ್ರಭುತ್ವದ ಹೊಸ ಬಾಳಿಗೆ ||

 ಕೋಟಿ ದೇವರುಗಳ ನಾಡಿದು
 ಸಕಲ ಕಲೆಗಳ ಬೀಡಿದು 
 ಭಾರತಾಂಬೆಯ ಮಕ್ಕಳು ನಾವು 
 ಕೂಡಿ ಬಾಳೋಣ ಎಂದಿಗೂ ನಾವು ||

 ಸತ್ಯ ಧರ್ಮಗಳ ಹಾದಿಯಲಿ 
 ಸೋಲಿಲ್ಲದ ನಮ್ಮ ಬಾಳಿನಲಿ 
 ಏಳಿರಿ ಗೆಳೆಯರೇ ಕೇಳಿರಿ ಗೆಳೆಯರೇ 
 ರೋಷ ವೇಷದ ಕುಡಿಗಳೇ ||

 ಚಾಚಾ ನಮ್ಮ ದಾರಿ ಕಣೊ
 ಹಿರಿಯರೇ ನಮ್ಮ ದೈವ ಕಣೊ 
 ಛಲವೇ ನಮ್ಮ ಗುರುವಮ್ಮ 
 ಗೆಲುವಿಗೆ ಸ್ಪೂರ್ತಿ ನೀನಮ್ಮ ||

 ಗಾಂಧೀ ನೆಹರೂ ಇಹರಮ್ಮ 
 ಪ್ರಜಾಪ್ರಭುತ್ವ ನಮ್ಮಗಮ್ಮ
 ಭಾರತದ ಗೆಲುವು ಉಳಿಯಲಿ 
 ಭಾರತೀಯರಲಿ ಛಲವು ಬೆಳೆಯಲಿ ||

                                            ವಿದ್ಯಾ ಕುಮಾರಿ ಯನ್
                                              9 ಬಿ ತರಗತಿ

No comments: