Tuesday 25 November 2014

           ಕನಸಿನ ಲೋಕ

     ಬಾಳಿಗೆ ಕನಸದು ಸುಂದರ 
     ಹಾಡಿಗೆ ತಾಳವು ಮನೋಹರ 
     ಕನಸೇ ನಮ್ಮಯ ಸ್ಪೂರ್ತಿ 
     ಬದುಕಿಗೆ ಅದುವೇ ಕೀರ್ತಿ ||

     ಗೆಲುವಿಗೆ ಮೂಲ ಛಲವಮ್ಮ
     ನಿದ್ರೆಗೆ ಸಾವಿರ ಕನಸಮ್ಮ
     ಮುಚ್ಚಿದ ಕಣ್ಣು ಸ್ವರ್ಗಕೆ ದಾರಿ 
     ಸ್ವರ್ಗಕೆ ಮೆಲ್ಲನೆ ನಾ ಜಾರಿ ||

     ಕಂಡೆನು ನೂರು ಕನಸನು 
     ನೂರು ನೂರು ರೀತಿಯಲಿ 
     ಕಂಡೆನು ಅದರಲಿ ಕನಸಿನ ಕನಸನು 
     ಕನಸೆ ನನ್ನ ಬಾಳಿನ ಜ್ಯೋತಿಯದು ||
   
     ಚಂದ್ರನ ಹುಣ್ಣಿಮೆ ಬೆಳಕಿನಲಿ 
     ಬಾಳಿನ ಬೆಳಕು ಕನಸಿನಲಿ  
     ಬೆಳಂದಿಗಳ ಸ್ವಪ್ನವು ಸುಂದರ 
     ಮನಸಿಗೆ ಅದು ದೇವ ಮಂದಿರ ||

    ಉಗ್ರ ಕನಸಿನ ಭೀತಿಯಲಿ 
    ಅಮ್ಮನ ಅಪ್ಪುಗೆ ಪ್ರೀತಿಯಲಿ 
    ಮರೆತೆನು ಉಗ್ರ ಕನಸನು 
    ಕಾಣುತಲಿ ಅಮ್ಮನ ಮೊಗವನು ||

    ನಾವು ಕಾಣುವ ಸುಂದರ ಸ್ವಪ್ನವನು 
    ಇದು ದೂರ ಮಾಡಲಿ ಮನಸಿನ ಭಾರವನು 
    ಸುಂದರ ಕನಸನು ಕಾಣುತ ನಾವು 
    ನಮ್ಮಯ ಬಾಳ್ವೆಯ ಬೆಳಗೋಣ || 

    ಕನಸಿರಲಿ ಬದುಕಿನಲಿ 
    ನನಸಾಗಲಿ ಈ ಬಾಳಿನಲಿ 
    ಕನಸೇ ನಮ್ಮಯ ಸುಂದರ ಜೀವನ 
    ನನಸಾದರೆ ಬಾಳೇ ಪಾವನ ||

                                                    ವಿದ್ಯಾಕುಮಾರಿ ಯನ್ 
                                                    9 ಬಿ ತರಗತಿ
    

No comments: