Monday, 20 July 2015

ಮುಸ್ಸಂಜೆ

ಮುಸ್ಸಂಜೆ ಬಾನದು ಚಂದ

ಮುಂಜಾನೆ ಕಡಲದು ಅಂದ

ಮುಸ್ಸಂಜೆ ಹೊಂಬಣ್ಣದ ಸೂರ್ಯ ಬರುತಾನೆ

ಖುಷಿಯ ತರುತಾನೆ ಮನದಲಿ ಹರುಷ ತುಂಬುತಾನೆ

ಬಾನಲಿ ಕಂಡೆನು ನಾ ನಿಂದು ಆ ಹಕ್ಕಿಯ ಮಾಲೆಯನು

ಆ ಸೌಂದರ್ಯದ ಸುಂದರ ಪ್ರಕೃತಿಯನು

ಬಣ್ಣಿಸಲಾಗದ ಆ ಮುಸ್ಸಂಜೆಯದು

ಪೋಣಿಸಲಾಗದ ಹೂವಿನಂತೆ 

ಚೆಲುವಿನ ಚೆಲುವು ಆ ಮುಸ್ಸಂಜೆ

ಒಲವಿನ ಒಲವು ಈ ಮುಂಜಾನೆ

ಕಣ್ಣ ತುಂಬ ಹೊಂಬಣ್ಣ

ಮನದ ತುಂಬ ಗಿರಿಯ ಬಣ್ಣ

ಒಲವಿನ ಧಾರೆ ಚಂದ

ಸಂಜೆಯ ಕಿರಣ ಅಂದ

ಗೂಡನು ಸೇರುವ ಹಕ್ಕಿಯ ಕೂಗದು ಬಲು ಚಂದ

ಮನಸಿಗೆ ಆನಂದ ಪ್ರೀತಿಯ ಮಧುಗಂಧ

ಸುಪ್ರಭಾತ ಹೇಳುವ ಸೂರ್ಯ ಮಾಯವಾದ ಬಾನಲ್ಲಿ

ಮುಳುಗಿ ಹೋದ ಕಡಲಲ್ಲಿ

ಭಾವನೆಗಳ ಕಡಲಲ್ಲಿ ಇರುತಾನೆ ಅನುದಿನ ಸೂರ್ಯನಿಲ್ಲಿ

ಕಣ್ಣಮುಂದೆ ಬರುತಾನೆ ಪ್ರತಿದಿನ ಸೂರ್ಯೋದಯದ ಆ ಕ್ಷಣದಲ್ಲಿ  || 

                                                              ವಿದ್ಯಾ ಕುಮಾರಿ ಎನ್

                                                                 10 ಬಿ ತರಗತಿ

  

                   

 

No comments: