Thursday 13 November 2014

ನವಜೀವನ ಪ್ರೌಢಶಾಲೆಯಲ್ಲಿ ನಿನ್ನೆ (12-11-2014)ಕುಂಬಳೆ ಉಪಜಿಲ್ಲಾ ವಿಜ್ಞಾನ,ಗಣಿತ. ಐ.ಟಿ ,ವೃತ್ತಿ ಪರಿಚಯ, ಹಾಗೂ ಸಮಾಜ ವಿಜ್ಞಾನ ಮೇಳಗಳಲ್ಲಿ ಭಾಗವಹಿಸಿದ ನಮ್ಮ  ಶಾಲೆಯ ವಿದ್ಯಾರ್ಥಿಗಳು ಉತ್ತಮಸಾಧನೆ ತೋರಿದ್ದಾರೆ.ವಿಜ್ಞಾನ ಮೇಳದಲ್ಲಿ ಸತತ ಮೂರನೆಯ ಬಾರಿ ಪ್ರಶಸ್ತಿ ಗೆಲ್ಲುವುದರೊಂದಿಗೆ ರೋಲಿಂಗ್ ಟ್ರೋಫಿಯನ್ನು  ತಮ್ಮದಾಗಿಸಿಕೊಂಡಿದ್ದಾರೆ.ಐ.ಟಿ ಮೇಳದಲ್ಲಿ ದ್ವಿತೀಯ ಸ್ಥಾನ(ರನ್ನರ್ ಅಪ್) ಹಾಗೂ ಸಮಾಜ ವಿಜ್ಞಾನ ಮೇಳದಲ್ಲಿ ತೃತೀಯ ಸ್ಥಾನವನ್ನು ಗೆದ್ದು ಶಾಲೆಗೆ ಕೀರ್ತಿ ತಂದಿರುತ್ತಾರೆ. ವೃತ್ತಿಪರಿಚಯಮೇಳದಲ್ಲಿಯೂ ಉತ್ತಮ ಸಾಧನೆ ತೋರಿ 7 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಿಗಿರುವ ಟ್ರೋಫಿಯನ್ನು ಶಾಲಾ ಅಸೆಬ್ಲಿಯಲ್ಲಿ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರನಾಥ ನಾಯಕ್ ಅವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.ಬಳಿಕ ವಿಜಯೋತ್ಸವ ಮೆರವಣಿಗೆ ನಡೆಯಿತು.

ವಿಜ್ಞಾನ ಮೇಳದ ಪ್ರಶಸ್ತಿಯೊಂದಿಗೆ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತುಮಾರ್ಗದರ್ಶನ ನೀಡಿದ ಅಧ್ಯಾಪಕರು










ಐ.ಟಿ  ಮೇಳದ ಪ್ರಶಸ್ತಿಯೊಂದಿಗೆ ಭಾಗವಹಿಸಿದ 
ವಿದ್ಯಾರ್ಥಿಗಳು  ಮತ್ತು ಮಾರ್ಗದರ್ಶನ ನೀಡಿದ ಅಧ್ಯಾಪಕರು





ವಿಜಯೋತ್ಸವ ಮೆರವಣಿಗೆ

No comments: