ಜೀವನವನ್ನು ಸಂತೋಷದಿಂದ ಹೇಗೆ ಕಳೆಯಬೇಕು ಎನ್ನುವದನ್ನು ತಿಳಿಯದಿದ್ದವನು ಮನುಷ್ಯನೇ ಅಲ್ಲ.
- ಸರ್ವಜ್ಞ
ಶಾಲೆ ತರಗತಿಯಲ್ಲಿ ಕೊನೆಗೊಳ್ಳುತ್ತದೆ. ಆದರೆ ಅಲ್ಲಿ ಕಲಿಯುವ ಶಿಕ್ಷಣ ನಮ್ಮ ಬದುಕಿನೊಂದಿಗೆ ಕೊನೆಗೊಳ್ಳುತ್ತದೆ.
- ಫ್ರೆಡರಿಕ್ ರಾಬರ್ಟಸನ್
ಜೀವನವೆಲ್ಲಾ ಬೇವೂ ಬೆಲ್ಲ ,ಎರಡೂ ಸವಿದವನೇ ಕವಿ ಮಲ್ಲ
- ಕುವೆಂಪು
ಕಷ್ಟಗಳು ಹೆಚ್ಚಾದರೆ ಬುದ್ದಿ ಚುರುಕಾಗಿ ಕೆಲಸ ಮಾಡುತ್ತದೆ.
- ಎಮರ್ಸನ್
ನಗುವಿಲ್ಲದ ದಿನವನ್ನು ನೀವು ಕಳೆದಿರಿ ಎಂದರೆ ಆ ದಿನವನ್ನು ನೀವು ವ್ಯರ್ಥ ಮಾಡಿದಂತೆ.
- ಚಾರ್ಲಿ ಚಾಪ್ಲಿನ್
ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ,ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು.
- ಡಾ. ಎ.ಪಿ.ಜೆ ಅಬ್ದುಲ್ ಕಲಾಂ
ಅದೃಷ್ಟವಂತ ಎ೦ದರೆ ಅವಕಾಶವನ್ನು ಪಡೆಯುವವನು,ಬುದ್ದಿವಂತ ಎ೦ದರೆ ಅವಕಾಶವನ್ನು ಸೃಷ್ಠಿಸಿಕೊಳ್ಳುವವನು, ಪಡೆದ ಅವಕಾಶವನ್ನು
ಉಪಯೋಗಿಸಿಕೊಳ್ಳುವವನೇ ಗೆಲ್ಲುವವನು... !!
- ಸ್ವಾಮಿ ವಿವೇಕಾನಂದ
ಒಬ್ಬ ಶಿಕ್ಷಕ ತಾನು ಕಲಿಯದೆ ಇನ್ನೊಬ್ಬರಿಗೆ ಕಲಿಸಲಾರ.ತಾನು ಉರಿಯದ ದೀಪ ಇನ್ನೊಂದುದೀಪವನ್ನು ಬೆಳಗಿಸಲಾರದು.
- ರವೀಂದ್ರನಾಥ್ ಟ್ಯಾಗೋರ್.
ವಿದ್ಯೆ ಗುರುಗಳ ಗುರು
- ಭ್ರತೃ ಹರಿ.
ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ
- ವಿವೇಕಾನಂದ
ಮನುಷ್ಯನಿಗೆ ಯಾವುದು ಗೊತ್ತಿಲ್ಲವೋ ಅದನ್ನು ತಿಳಿಸುವುದು ವಿದ್ಯಾಭ್ಯಾಸದ ಗುರಿಯಲ್ಲ. ಹೇಗೆ ವರ್ತಿಸಬೇಕೆಂದು ತಿಳಿಸುವುದೇ ವಿದ್ಯಾಭ್ಯಾಸದ ಗುರಿ
- ಜಾನ್ ರಸ್ಕಿನ್.
ವಿದ್ಯೆಯೊಂದಿಗೆ ಆದರ್ಶ ಗುಣಗಳು ನಿನ್ನಲ್ಲಿ ಬರದಿದರೆ ನೀನು ಓದಿದ್ದು ವ್ಯರ್ಥ
-ಪ್ರೇಮಚಂದ್.
ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ.
ಮಹಾತ್ಮ ಗಾಂಧೀಜಿ.
ಏಳು ಎದ್ದೇಳು ನಿನಗಾಗಿ ಕಾಯುತ್ತಿದೆ ಒಂದು ಸುಂದರ ದಿನ .ಒಳ್ಳೆಯ ಗುರಿಯತ್ತ ನಡೆ. ನಿರ್ದಿಷ್ಟತೆಯ ಜೊತೆ ಓಡು ಸಾಧನೆಗಳ ಜೊತೆ ಹಾರಾಡು
ನಿನಗಾಗಿ ಕಾಯುತ್ತಿರುವ ಸುಂದರ ಬದುಕಿದೆ ಏಳು ಎದ್ದೇಳು.
- ಸ್ವಾಮಿ ವಿವೇಕಾನಂದ
ಸಾವಿರಾರು ಜನರನ್ನು ಗೆಲ್ಲುವವನು ವೀರನಲ್ಲ, ಮನಸ್ಸನ್ನು ಗೆಲ್ಲುವವನು ವೀರ
-
-ಗೌತಮ
ಬುದ್ದ
No comments:
Post a Comment