Monday, 7 July 2014

Article BY Kavya P K 10 D

          ಗೌರವಿಸು ಗುರುವ

                             ಪಡೆಯುವಿ ಜ್ಞಾನವ

                   
                    ರಟ್ಟೆ ಇದ್ದವನು ದುಡಿಯಲೇ ಬೇಕು
                    ಹೊಟ್ಟೆ ಇದ್ದವನು ಉಣ್ಣಲೇ ಬೇಕು.
        ಎಂಬ ಮಾತು ಓರ್ವ ವ್ಯಕ್ತಿಗೆ ಯಾವ ಕ್ಷೇತ್ರದಲ್ಲಿ ಸಾಮರ್ಥ್ಯ ಇರುತ್ತದೆಯೋ ,ಆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು.ಈ ಸಾಧನೆಯನ್ನು ಮಾಡಲು ನಮಗೆ ನಿರ್ದಿಷ್ಟ ಗುರಿ ಮತ್ತು ದಾರಿ ಇರಬೇಕು.ಆ ದಾರಿಯನ್ನು ತೋರಿಸುವವನೇ ಗುರು.ಪ್ರಾಚೀನ ಕಾಲದ ಗುರುವಿನ ಸ್ಥಾನ ಮತ್ತು ಆಧುನಿಕ ಗುರುವಿನ ಸ್ಥಾನ ತುಲನೆ ಮಾಡಿದಾಗ ಈಗಿನ ವಿದ್ಯಾರ್ಥಿಗಳು ಗುರುವನ್ನು ಗೌರವಿಸುತ್ತಿಲ್ಲ ಸರಿಯಾಗಿ ವರ್ತಿಸುತ್ತಿಲ್ಲ.ಆಶ್ಚರ್ಯವೆಂದರೆ ವಿದ್ಯೆ ಕಲಿಸಿದ ಗುರುವಿಗೆ ಈ ರೀತಿ ಮಾಡುತ್ತಾರೆ ಎನ್ನುವುದು ವಿಷಾದದ ಸಂಗತಿಯಾಗಿದೆ.ಆದುದರಿಂದಲೇ ಮಾನವನ ದುರ್ವಿಧಿಯ ಪಟ್ಟಿ ಇಷ್ಟು ಉದ್ದವಾಗಿ ಬೆಳೆಯಲು ಕಾರಣವಾಗಿದೆ.ಅಂದರೆ,
                        ಸ್ವಾತಂತ್ರ್ಯ ಬಂದು ಸೌಜನ್ಯ ಹೋಗಿದೆ
                        ವಿದ್ಯೆ ಬಂದು ವಿನಯ ಹೋಗಿದೆ
                        ವಿಜ್ಞಾನ ಬಂದು ಸಮಾಧಾನ ಹೋಗಿದೆ
                        ಮಾತು  ಬಂದು ಕೃತಿ ಹೋಗಿದೆ 
                        ಸಮೃಧ್ಧಿ ಬಂದು ಸಂಸ್ಕೃತಿ ಹೋಗಿದೆ 
                        ಬೋಧನೆ  ಬಂದು ಸಾಧನೆ ಹೋಗಿದೆ
                         ಬುದ್ಧಿ ಬಂದು ಶ್ರದ್ಧೆ ಹೋಗಿದೆ
                         ಜಾತಿ ಬಂದು ಪ್ರೀತಿ ಹೋಗಿದೆ 
                         ಸ್ವಾರ್ಥ ಬಂದು ಸೇವೆ ಹೋಗಿದೆ  
                         ನಾನು ಬಂದು ನಾವು ಹೋಗಿದೆ 
       ಹೀಗಾಗಲು ಕಾರಣವೇನೆಂದರೆ ಗುರುವಿಗೆ ಗೌರವವನ್ನು ಕೊಡದಿರುವುದು."ಗುರು" ಎಂಬ ಪದ ಸಾಮಾನ್ಯ ಪದ ಅಲ್ಲ.ಅದರ ಮಹತ್ವವೇನು ಎಂಬುದು ಅನುಭವದ ಮೂಲಕವೇ ತಿಳಿಯಬೇಕು."ಉಳಿ ಏಟನ್ನು ಪೆಟ್ಟು ಎಂದು ಭಾವಿಸಿದರೆ ಯಾವ ಶಿಲೆಯೂ ಶಿಲ್ಪವಾಗುದಿಲ್ಲ.ನೇಗಿಲು ಉಳುವುದನ್ನು ನೋವು ಎಂದು ಭಾವಿಸಿದರೆ ಯಾವ ಭೂಮಿಯು ಫಲ ಕೊಡುವುದಿಲ್ಲ".ಇದೇ ರೀತಿ ಗುರುಗಳು ಬೈಯುವುದನ್ನು ತಪ್ಪು ಎಂದು ಭಾವಿಸಿದರೆ ಯಾವ ವಿದ್ಯಾರ್ಥಿಯು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ.ಅದೇ ರೀತಿ ನಮ್ಮ ಭವಿಷ್ಯದ ಯಶಸ್ಸಿಗೆ ಗುರು ಅಗತ್ಯ.ಹೀಗಾಗಲು ವಿದ್ಯೆಯನ್ನು ಶ್ರದ್ಧೆಯಿಟ್ಟು ಕಲಿಯಬೇಕು.
                                                                                             ಕಾವ್ಯ ಪಿ ಕೆ
                                                                              10 ಡಿ ತರಗತಿ

No comments: