ತಾರೆ
ನೀಲಾಕಾಶದ ಮೋಡಗಳೆಡೆಯಲಿ
ನುಸುಳಿಕೊಂಡಿರುವ ಆ ತಾರೆ
ಪ್ರತಿ ರಾತ್ರಿ ಅದನು ನೋಡಲು
ಹಂಬಲಿಸುವ ಪುಟ್ಟ ಬಾಲೆ ||
ಬೆಳ್ಳಿಯಂತೆ ಹೊಳೆಯುವ
ಹೊಂಬಣ್ಣದ ಅದರ ಜ್ವಾಲೆ
ಅರಳಿಸುವುದು ಪುಟ್ಟ ಮಗುವಿನ
ಮನದ ಸ್ನೇಹ ಕಲೆ ||
ಮೇಘ ಚಂದಿರರ ಮಧ್ಯೆ
ಅಡಗಿರುವುದು ತುಂಬಾ ಜೋಪಾನ
ಹೊಳೆಯುತ್ತಾ ಮಿಟುಕುತ್ತಾ ನಿಂತಿರುವದಕೆ
ಲಭಿಸುವುದೇ ಪ್ರಕೃತಿಯ ಸಾಂತ್ವಾನ ||
ಬೆಳ್ಳಿ ತಾರೆ ಎಂದೇ ಅರಿವ
ಈ ನಕ್ಷತ್ರ
ಆಕಾಶಕ್ಕೆ ಕಟ್ಟಿರುವ ವಜ್ರದ
ತೋರಣ ||
ಕಂದಮ್ಮನ ತೊದಲು ನುಡಿಗೆ
ಹುಂ ಗುಟ್ಟುವ ಈ ತಾರೆ
ಮಗುವಿನ ಆಸೆಗೆ ಒಮ್ಮೆ
ಧರೆಗಿಳಿದು ಬಾರೇ ||
ಅಖಿಲ ಯಂ
೧೦ ಬಿ ತರಗತಿ
No comments:
Post a Comment