ಹಕ್ಕಿಯ ಹಾಡು
ನಾಡಿಗೆ ಬಂದಿತು ಕಾಡಿನ ಹಕ್ಕಿ
ಕುಳಿತಿತು ಕಾಂಕ್ರೀಟ್ ಕಟ್ಟಡದಲ್ಲಿ
ಕೆಳಗಡೆ ನೋಡಲು ಇರುವೆಗಳಂತೆ
ಬಲು ವಾಹನಗಳ ಸಾಲೇ ಸಾಲು
ಕಿವಿಯನು ಚುಚ್ಚುವ ಹಾರನ್ ಸದ್ದು
ಜೊತೆಯಲಿ ಕೇಳಿತು ಸೈರನ್ ಸದ್ದು
ಮಕ್ಕಳು ಸಿಡಿಸಿದ ಪಟಾಕಿ ಸದ್ದು
ನಾಲ್ಕೂ ದಿಕ್ಕಲಿ ಸದ್ದೇ ಸದ್ದು
ನೋಡಿತು ಸುತ್ತಲೂ ಕಾಡಿನ ಹಕ್ಕಿ
ಓಡಿತು ಭರದಿ ಚೀರುತ ಭಯದಿ
ಹಾರಿತು ಕಾಡಿಗೆ ನಾಡನು ಬಿಟ್ಟು
ಕರೆಯುತ ಹೋಯಿತು ಬಳಗವನು
ಬಿಕ್ಕುತ ಚೀರುತ ಕಾಡನು ಹೊಕ್ಕು
ಕೂಗುತ ಹೇಳಿತು ನಾಡಿನ ಗುಟ್ಟು
ಕೇಳಿರಿ ಕೇಳಿರಿ ಬಂಧುಗಳೇ
"ಸ್ವಾತಂತ್ರವಿರುವುದು ಈ ಕಾಡಿನಲಿ ಭಯವು ತಪ್ಪದು ಆ ನಾಡಿನಲಿ "
ಕಿರಣ್ ಬೋರ್ಕರ್
೧೦ ಬಿ ತರಗತಿ
No comments:
Post a Comment