ಪರಿಸರ
ಬನ್ನಿರಿ ಬನ್ನಿರಿ ಊರಿನ ಜನರೆ
ಮಾಡೋಣ ನಮ್ಮಯ ಕರ್ತವ್ಯ
ಭೂಮಿಯ ಉಳಿಸಲು ನಾವೆಲ್ಲ ಸೇರಿ
ಮಾಡೋಣ ಪರಿಸರ ನೈರ್ಮಲ್ಯ ||
ರಸ್ತೆಯಂಚಿನಲಿ ಗಿಡಗಳ ನೆಟ್ಟು
ಮರಗಿಡಗಳನು ಬೆಳೆಸೋಣ
ಸುತ್ತಮುತ್ತಲಿನ ಕಸಗಳ ಹೆಕ್ಕಿ
ನಮ್ಮಯ ಗ್ರಾಮವ ಬೆಳೆಸೋಣ ||
ಕಟ್ಟಿಗೆಯ ಬದಲು ಸೌರಒಲೆ ಹಚ್ಚಿ
ಪ್ಲಾಸ್ಟಿಕ್ ಬದಲು ಕೈ ಚೀಲವ ಬಳಸುತ
ದಟ್ಟ ಕಾರ್ಖನೆಗಳ ಹುಟ್ಟನು ಅಡಗಿಸುತ
ನಮ್ಮಯ ಗ್ರಾಮವ ಬೆಳೆಸೋಣ ||
ಜನ ಜಾಗೃತಿಗಾಗಿ ಬೀದಿ ನಾಟಕವಾಡೋಣ
ನಿರ್ಮಲ ಪರಿಸರದ ಸಂದೇಶವ ಸಾರೋಣ
ಪ್ರಕೃತಿಯ ಉಳಿವಿಗಾಗಿ ಸಹಕಾರವನು ನೀಡೋಣ
ನಮ್ಮಯ ಗ್ರಾಮವ ಬೆಳೆಸೋಣ ||
8 ಎ ತರಗತಿ
No comments:
Post a Comment