Friday, 5 September 2014

ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

ತಾರೀಕು 05-09-2014 ರಂದು ಶೇಣಿ ಶಾಲೆಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು.ಬೆಳಗ್ಗೆ ಶಾಲಾ ಅಸೆಂಬ್ಲಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶ್ರೀ ರವೀಂದ್ರನಾಥ ನಾಯಕ್ ಅವರು ಶಿಕ್ಷಕರ ದಿನದ ಮಹತ್ವವನ್ನು ವಿವರಿಸಿದರು. ಭಾರತದ ರಾಷ್ಟ್ರಪತಿಯಾಗಿದ್ದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಸಮಾಜದಲ್ಲಿ ಗುರುವಿನ ಸ್ಥಾನ ಹೆತ್ತವರ ನಂತರ ಬರುತ್ತದೆ. ಗುರು ಶಿಷ್ಯರಿಗೆ ವಿದ್ಯಾದಾನ ಮಾಡುವುದಲ್ಲದೆ ಅವರಿಗೆ ಕಲಿಯಲು ಸ್ಫೂರ್ತಿ ನೀಡುತ್ತಾನೆ, ಅವನಲ್ಲಿರುವ ಸುಪ್ತವಾದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಾನೆ,ಮತ್ತು ಅವನ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶಿಯಾಗುತ್ತಾನೆ ಎಂದು ಅಭಿಪ್ರಾಯಪಟ್ಟರು.ಬಳಿಕ ಹಿರಿಯ ಅಧ್ಯಾಪಕರು ಮಾತನಾಡಿ ಮಕ್ಕಳೊಂದಿಗೆ ಅಧ್ಯಾಪಕ ದಿನದ ಸಂತೋಷವನ್ನು ಹಂಚಿಕೊಂಡರು.ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಸ್ಕೌಟ್ ಮತ್ತು ಗೈಡ್ಸ್ ನ ಮಕ್ಕಳಿಂದ ಗುರವಂದನಾ ಕಾರ್ಯಕ್ರಮ ನಡೆಯಿತು.
























No comments: