ಬೆಳದಿಂಗಳು
ಸಂಜೆಯ ಸಮಯದಿ ಸೂರ್ಯನು ಮುಳುಗಿ
ಚಂದ್ರನು ಉದಯಿಸುವನು
ಮಿನುಗುವ ತಾರೆಗಳೆಡೆಯಲಿ
ಚಂದ್ರನು ನಗುತಿಹನು||
ರಾತ್ರಿಯ ಚಂದ್ರನ ಬೆಳಕನು
ನೋಡಲು ಬಲುಚೆಂದ
ಮಿನುಗುವ ತಾರೆಯ ಹೊಳಪನು
ನೋಡಲು ಬಲು ಅಂದ ||
ಸಂಜೆಯ ಹೊತ್ತಲಿ ತಾಯಿಯ
ಮಡಿಲಲಿ ಕುಳಿತು ತುತ್ತನು ತಿನ್ನುವಳು
ತುತ್ತನು ಸವಿಯುತ ಚಂದ್ರನ
ಅಂದವನು ನೋಡುವಳು ||
ಇರುಳ ಬೆಳದಿಂಗಳು ಸವಿಯುತಳವಳು
ನಿಂತಳು ಅಂಗಳದಲಿ
ಮಿನುಗುವ ತಾರೆಯ ಗುಂಪನು ನೋಡುತ
ನಗುತಿಹಳು ಮನದೊಳಗೆ ||
ಅದನು ತಿಳಿದ ತಾರೆಗಳ ಗುಂಪು
ನಗುತಿರುವರು.
ನಗುವ ತಾರೆಗಳನು ನೋಡಿ
ಚಂದ್ರನು ನಗುತಿಹನು ||
ಮುಸ್ಸಂಜೆಯಲಿ ಉದಯಿಸಿದ
ಚಂದ್ರನು ಮುಂಜಾನೆಯಲಿ ಕಣ್ಮರೆಯಾದ
ಸೂರ್ಯನ ಕಿರಣಗಳ ಬೆಳಕಿಗೆ
ಚಂದ್ರನು ಮಾಯವಾದ ||
ಡೇಶ್ಮ ಡಿ' ಸೋಜ
9 ಬಿ ತರಗತಿ
No comments:
Post a Comment