ಶುಭಾಶಯವಿದು ನಿನಗಮ್ಮ
ನಗುವು ಇರಲಿ ಛಲವು ಬರಲಿ
ವಿದ್ಯಾ ಕುಮಾರಿ
೧೦ ಬಿ ತರಗತಿ
ನಗುವು ಇರಲಿ ಛಲವು ಬರಲಿ
ಗೆಲುವು ಎಂದು ನಮ್ಮದಾಗಿರಲಿ
ಮನೆಯೇ ಮೊದಲ ಪಾಠಶಾಲೆ
ಮೊದಲ ಗುರುವೇ ನೀನಮ್ಮ ||
ಪ್ರೀತಿ ನೀಡಿ ಮಮತೆ ನೀಡಿ
ತುತ್ತ ನೀಡಿ ಸಲಹುವಳು
ಜ್ಞಾನಧಾರೆ ಎರೆಯುವಳು
ಅವಳೇ ನನ್ನ ಒಲವಿನ ಅಮ್ಮ ||
ವಿದ್ಯಾಲಯದ ಪ್ರವೇಶ ದಿನವೇ
ನನ್ನ ತಾಯಿಯ ಜನುಮದಿನ
ಅವಳ ಪ್ರೀತಿ ಅವಳ ಮಮತೆ
ಅವಳ ನಗುವಿರಲಿ ಅನುದಿನ ||
ಚಿರಕಾಲ ನೀ ಬಾಳಬೇಕಮ್ಮ
ನನ್ನ ಬದುಕಿಗೆ ನೀ ದಾರಿ ತೋರಮ್ಮ
ಅನುದಿನ ನಿನ್ನ ನೆನೆದೆನಮ್ಮ
ನಿನ್ನ ಪ್ರೀತಿ ಶಾಶ್ವತವಮ್ಮ ||
ನಿನ್ನ ನೆನೆದರೆ ಸೋಲಿಲ್ಲ
ಪ್ರೀತಿ ಮಾತಿಗೆ ಕೊನೆಯಿಲ್ಲ
ತಾಯ ಹೃದಯ ಗೂಡಮ್ಮ
ಆ ಗೂಡಿನ ಕಂದ ನಾನಮ್ಮ ||
ನಿನ್ನ ಮರೆತರೆ ನನ್ನ ಉಸಿರೇ ನಿಂತಂತೆ
ನಿನ್ನ ಮರೆಯಲಾರೆ ಈ ಜನ್ಮದಿ
ಮರೆತು ಬಾಳಲಾರೆ ನಿನ್ನನ್ನು
ಅಮ್ಮನ ಪ್ರೀತಿಯು ಶ್ರೇಷ್ಠವದು ||
ವಿದ್ಯಾ ಕುಮಾರಿ
೧೦ ಬಿ ತರಗತಿ
No comments:
Post a Comment