Thursday, 26 June 2014

ಶೇಣಿ: ಜೂನ್ 26: ವಿಶ್ವ ಮಾದಕದ್ರವ್ಯ ವಿರುದ್ಧ ದಿನಾಚರಣೆ

ವಿಶ್ವ ಮಾದಕ ದ್ರವ್ಯ ವಿರುದ್ಧ ದಿನಾಚರಣೆಯನ್ನು ಶೇಣಿ ಶ್ರೀ ಶಾರದಾಂಬಾ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್ ಅವರು ಮಾದಕ ದ್ರವ್ಯಗಳ ಸೇವನೆ ಒಂದು ಸಾಮಾಜಿಕ ಪಿಡುಗು.ಅದರ ಹಿಡಿತಕ್ಕೆ ಒಳಗಾದರೆ ಮತ್ತೆ ಹೊರಬರುವುದು ಕಷ್ಟ ಸಾಧ್ಯ.ಸಾಮಾಜಿಕ ಪರಿವರ್ತನೆಯಾದರೆ ಮಾತ್ರ ಇದರಿಂದ ದೂರವಿರಬಹುದು.ಇದು ಯುವ ಜನತೆಯಿಂದ ಮಾತ್ರ ಸಾಧ್ಯ.ಆದ್ದರಿಂದ ಯುವ ಪೀಳಿಗೆ ಜಾಗೃತರಾಗಿ ಈ ಪಿಡುಗಿಗೆದುರಾಗಿ ಪ್ರತಿಕ್ರಿಯಿಸಬೇಕು.ಜನರಲ್ಲಿ ಜಾಗೃತಿಯನ್ನುಂಟುಮಾಡಬೇಕು. ಆ ಮೂಲಕ ಸ್ವಸ್ಥ ಸಮಾಜದ ನಿರ್ಮಾಣವಾಗಬೇಕು ಎ೦ದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಅಧ್ಯಾಪಕರಾದ ಪ್ರಶಾಂತ ಕುಮಾರ್ ಮತ್ತು ಶಾಸ್ತಾ ಕುಮಾರ್ ಅವರು ಮಕ್ಕಳಿಗೆ ಕನ್ನಡ ಮತ್ತು ಮಲಯಾಳದಲ್ಲಿ ಮಾದಕ ದ್ರವ್ಯ ವಿರುದ್ಧ ಪ್ರತಿಜ್ಞೆಯನ್ನು ಬೋಧಿಸಿದರು.ಅನಂತರ ಶಾಲಾ ಮಕ್ಕಳ ವರ್ಣರಂಜಿತ ಮೆರವಣಿಗೆಯು ಶ್ರೀ ಶಿವಶಂಕರ ಭಟ್, ಚಿದಾನಂದ ಭಟ್, ಮಧುಸೂದನ ಹಾಗೂ ಇತರ ಅಧ್ಯಾಪಕರ ನೇತೃತ್ವದಲ್ಲಿ ನಡೆಯಿತು.ಮಕ್ಕಳು ಅವರೇ ತಯಾರಿಸಿದ ಹಾಗು ಸಂಗ್ರಹಿಸಿದ ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಫೋಷಣಾವಾಕ್ಯಗಳನ್ನು ಉಚ್ಛರಿಸಿದುದು ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು.

** ಮಕ್ಕಳು ತಯಾರಿಸಿದ ಘೋಷಣಾ ವಾಕ್ಯಗಳು 

1. ಮದ್ಯಪಾನ ಸಾವಿಗೆ ಸೋಪಾನ
2.ಅಮಲು ಪದಾರ್ಥಗಳ ವ್ಯಸನ
ಬರಡಾಗುವುದು ಜೀವನ
3. ಅಮಲಿನೊಂದಿಗೆ ಸರಸ
ಮನೆಮಂದಿಯಲಿ ವಿರಸ
ಜೀವನವೆ ನೀರಸ
4. ಹೆಂಡ ಸಾರಾಯಿ ಖಯಾಲಿ
ಜೇಬೆಲ್ಲ ಖಾಲಿ ಖಾಲಿ
5. ಹೆಂಡದ ಸಂಗ
ಮಾನಾಭಿಮಾನ ಭಂಗ
6. ಮದ್ಯ ಸೇವಿಸಿ ವಾಹನ ಸವಾರಿ
ಕಾಲನ ಊರಿಗೆ ರಹದಾರಿ
7. ಹೆಂಡದ ನೊರೆ
ಸಾಲದ ಹೊರೆ
8. ಮದ್ಯಪಾನ ಮಾಡಿ ವಾಹನ ಚಾಲನೆ
ಖಚಿತ ನಿಮಗೆ ಸೆರೆಮನೆ
ಕಾಲಪುರಿಯಾಗುವುದು ನೆರೆಮನೆ
9. ಮದ್ಯಪಾನ ಆಪತ್ತು
ಕರಗುವುದು ನಿಮ್ಮ ಸಂಪತ್ತು
ನಿಮಗಿರದು ಬಾಯಿಗೆ ತುತ್ತು
10. ಅಮಲು ಪದಾರ್ಥಗಳ ಚಟ
ಜೀವಕ್ಕೆ ಮುಳುವಾಗುವುದು ದಿಟ

11.ಮದ್ಯ ವರ್ಜನೆ
ಆಗಿರಲಿ ಬಾಳ ಉಪಾಸನೆ
12. ಮದ್ಯದ ನಂಟು
ಕಳೆಯುವಿರಿ ಗಂಟು
ಜೀವನ ಕುಂಟು
13. ಮದ್ಯ ವರ್ಜಿಸಿ
ಜೀವ ರಕ್ಷಿಸಿ
14. ಶರಾಬಿನ ಸುಖ ಕ್ಷಣಿಕ
ದುಃಖಕ್ಕೆ ನಾಂದಿಯದು ಬಳಿಕ
15. ಮದ್ಯದ ಹಾವಳಿ
ಸರಕಾರದ ಬಳುವಳಿ
ಆಗಲೇಬೇಕು ಇದಕ್ಕೆದುರು ಚಳುವಳಿ
16.ಹೆಂಡ ಸಾರಾಯಿ ಸಹವಾಸ
ಹೆಂಡತಿ ಮಕ್ಕಳ ಉಪವಾಸ
17. DRINK AND DRIVE DO NOT GO TOGETHER
18. SAY NO TO DRUGS
19. शराब का पीना
जिंदगी को गवाना
20. नशा का दास होना
जीवन का नाश करना

No comments: