Monday, 30 June 2014

 
ನೀನೇಕೆ ಮೌನವಾದೆ.....?

ಓ ನನ್ನ ಗೆಳೆಯ
ನಾನು ನಿನ್ನಂತೆ
ಆಗ ಬಯಸಿದೆ ಸರಳ
ಆದರೆ ಆಗುತ್ತಿಲ್ಲ ಏಕೆ
ನನ್ನ ಮನಸ್ಸು ನಿನ್ನಂತೆ ವಿಶಾಲ......

ಒಗ್ಗರಣೆಯಲ್ಲಿ
ನಾ ಸಾಸಿವೆಯಂತೆ ಸಿಡಿಯುತ್ತಿರಲು
ನೀನೇಕೆ ಮೌನವಾದೆ
ಎಣ್ಣೆಯಂತೆ

ಕಾಲವೆಂಬ ಗಡಿಯಾರದಲ್ಲಿ
ನಾ ಸೆಕೆಂಡಿನ ಮುಳ್ಳಿನಂತೆ
ಶಬ್ದಮಾಡುತ್ತಿರಲು
ನೀನೀಕೆ ನಿಮಿಷದ ಮುಳ್ಳಿನಂತೆ
ಮೌನವಾದೆ ಗೆಳೆಯ?

ಓ ನನ್ನ ಗೆಳೆಯ
ನಾನು ನಿನ್ನಂತೆ ಆಗಲು
ಪ್ರಯತ್ನಿಸಿದೆ ಬಹಳ
ಕೊನೆಗೂ ಆಗಲಿಲ್ಲವೇಕೆ
ಆ ನನ್ನ ಪ್ರಯತ್ನ ಸಫಲ....?  
Shayan James
VIII A Standard
SSHS Sheni

No comments: