Monday, 30 June 2014


 
   ಇಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುವ ಮಾತಿನಲ್ಲಿಯೇ ವಿದ್ಯಾರ್ಥಿ ಜೀವನದ ಮಹತ್ವ ಸರ್ವೋನ್ಮುಖವಾಗುವುದು.ವಿದ್ಯಾರ್ಥಿ ಅಂದ ಮೇಲೆ ಆತನಿಗಿರುವ ಕಟ್ಟುಪಾಡುಗಳೇ ಬೇರೆ.ಜ್ಞಾನಕ್ಕಾಗಿ ಓದಲು ಬರುವವನೇ ವಿದ್ಯಾರ್ಥಿ ಎನ್ನಬಹುದು. ಆತ ತನ್ನ ಏಕಾಂಗಿತನವನ್ನು ಓದಿನಲ್ಲಿ ಮರೆಯುತ್ತಾನೆ.ಚಿಕ್ಕಂದಿನಲ್ಲಿಯೇ ಮಕ್ಕಳಲ್ಲಿ ಚಿಮ್ಮಬೇಕಾದ ಚಿಲುಮೆಯೇ ಓದುವಿಕೆ.ಒಳ್ಳೆಯ ಹವ್ಯಾಸಗಳಲ್ಲಿ ಓದುಗಾರಿಕೆ ಒಂದು ಅಪೂರ್ವ ಕಲೆ. ವಿದ್ಯಾರ್ಥಿಯ ಸಂಪೂರ್ಣಜ್ಞಾನಭಿವೃಧ್ಧಿ ಸಾಧನೆಗಳಿಗಿರುವ ಏಕೈಕ ಮಾರ್ಗ.ಆದುದರಿಂದಲೇ ಮಕ್ಕಳು ಈ ಹವ್ಯಾಸವನ್ನು ರೂಢಿಸಿಕೊಳ್ಳುವುದು ಸರ್ವೋಚಿತ.ಪ್ರತಿಯೊಂದು ಮಗುವಿಗೂ ತನ್ನ ಮನವನ್ನು ಅರಳಿಸುವ ನೈಜ ಜೊತೆಗಾರನೆಂದರೆ ಪುಸ್ತಕಗಳು,ಇವು ಅಕ್ಷರ ಮಾಧ್ಯಮ ಕೈಂಕರ್ಯದಲ್ಲಿ ಪ್ರಮುಖವಾದವುಗಳು.ಓದುಗಾರಿಕೆ ಎನ್ನುವುದು ಕೇವಲ ಓದು ಕಲಿಯುದರಲ್ಲಿಯೇ ಸೀಮಿತ ಅಲ್ಲ.ಅದು ನಮ್ಮ ಜೀವನದ ಪರ್ಯಂತ ಸಾಂದರ್ಭಿಕ ರೀತಿಯ ಸುಶಿಕ್ಷಣವನ್ನೊದಗಿಸುವ ಕಲೆ ಎನ್ನಬಹುದು.
   ಜ್ಞಾನ ಎನ್ನುವುದು ಅರಿವಿನ ಬೆಳಕು,ತಿಳುವಳಿಕೆಯ ದೀಪ.ಈ ಬೆಳಕು ನಮಗೆ ಜೀವನದಲ್ಲಿಅತೀಅವಶ್ಶಕ.ಇದರ ಅಭಿವೃದ್ಧಿ ಓದುವಿಕೆಯಿಂದ ಫಲಿಸುತ್ತದೆ.ವಿದ್ಯಾರ್ಥಿಗೂ ಓದುವಿಕೆಗೂ ಇರುವಷ್ಟು ಆತ್ಮೀಯ ಸಂಬಂಧ ಬೇರೆಲ್ಲೂಇರಲಿಕ್ಕಿಲ್ಲ.ಇದರಿಂದ ವಿದ್ಯಾರ್ಥಿಗಳು ಸೃಜನಶೀಲರೂ,ಸುಶೀಲ ಸಂಪನ್ನರೂ ಆಗಬಹುದು.ಶ್ರದ್ಧೆ,ನಿಷ್ಠೆಯಿಂದ ಓದಿದರೆ ಜೀವನದಲ್ಲಿ ಸರ್ವಾಂಗೀಣ ವಿಕಸನವನ್ನು ಹೊಂದಲು ಸಾಧ್ಯ.ಓದುವಿಕೆಯು ಜ್ಞಾನದೇವಿಯ ದೇಗುಲದ ಬಾಗಿಲುಗಳನ್ನು ತೆರೆಯಿಸುವ ಒಂದು ಸರ್ವೋತ್ಕೃಷ್ಟ ಸಾಧಕ,ಜೀವನ ಸುಭದ್ರತೆಗೆ ಅಡಿಗಲ್ಲು.ಇದರಿಂದ ವಿದ್ಯಾರ್ಥಿಗೆ ತನ್ನ ಭಾವೀ ಜೀವನದಲ್ಲಿ ಶೈಕ್ಷಣಿಕ ರಂಗದಲ್ಲೂ ಮುನ್ನಡೆದು ಉತ್ತಮ ಭಾರತದ ಸುಪ್ರಜೆಯಾಗಲು ಸಾಧ್ಯವಿದೆ.ತನ್ನ ಪ್ರತಿಯೊಂದು ನಡೆನುಡಿಗಳಲ್ಲೂ ಧೈರ್ಯ,ಆತ್ಮವಿಶ್ವಾಸ ,ಏಕಾಗ್ರತೆಯನ್ನು ಕೇಂದ್ರಿಕರಿಸಲು ಸಾಧ್ಯವಿದೆ.
ಅಖಿಲ ಯಂ
10B ತರಗತಿ

                                                                                        

No comments: