Sunday, 2 November 2014

ಹುಣ್ಣಿಮೆ ಬೆಳದಿಂಗಳು
ಚಂದ್ರನು ನಗುತಿರೆ ಹುಣ್ಣಿಮೆಯ ಆ ಬೆಳಕು
ಸೂರ್ಯನು ಉದಿಸಿದರೆ ಬಾನಿಗೆ ಹೊಸ ಕಂಪು
ಬಾನಿಗೆ ಜ್ಯೋತಿ ಆ ಬಾನ ಚಂದಿರ
ಈ ಧರಣಿಗೆ ಗಗನವು ನೀಲಿ ಹಂದರ ||

ಮುಸ್ಸಂಜೆ ಕಳೆಯುತ್ತಾ ನವರಾತ್ರಿ ಮರಳುತ್ತಾ
ಹೊಸ ಬೆಳಕದು ಬಾಳಿಗೆ ಓಡೋಡಿ ಬರುತ್ತಾ
ಏನೋ ಉಲ್ಲಾಸ ಏನೋ ಆನಂದ
ಬೆಳದಿಂಗಳ ಬೆಳಕದು ಬಾನಿಗೆ ಐಶ್ವರ್ಯ ನಿಧಿಯಿದು ||

ಮನೆ ಮನೆ ಅಂಗಳಕದು ಚೆಲ್ಲಿದೆ ಹೊನ್ನಿನ ನೀರು
ಬೇಕಿಲ್ಲ ಬೆಳದಿಂಗಳಿಗೆ ಆ ಹೊಸ ತೇರು
ಹುಣ್ಣಿಮೆ ರಾತ್ರಿಯದು ಚಂದ್ರನ ಪ್ರತಿರೂಪ
ಲೋಕಕದು ಅಪರೂಪ ||

ಪ್ರತಿಕ್ಷಣ ಇರಲಿ ಆ ಬೆಳದಿಂಗಳು
ಅನುದಿನ ಬರಲಿ ಪೂರ್ಣ ಚಂದ್ರ ಬಾನಿಗೆ
ಬೆಳದಿಂಗಳ ಚಂದ್ರನಂತೆ ಮನುಕುಲವು ನಗುತಿರಲಿ
ಬೆಳದಿಂಗಳ ನಗುವಂತೆ ನಿಸ್ವಾರ್ಥದ ಪ್ರೀತಿ ಚೆಲ್ಲುತಿರಲಿ ಬಾಳಿನಲಿ ||

ಹೂಗಳ ಮೇಲೆ ಪನ್ನೀರ ಹನಿಯಂತೆ ಈ ಬೆಳದಿಂಗಳು
ಗಿರಿಗಳ ಮೇಲೆ ಸೊಬಗಿನ ಝರಿಯಂತೆ ಬೆಳದಿಂಗಳು
ಪ್ರತಿದಿನ ಸುರಿಯಲಿ ದೇವತೆಯ ಕುಸುಮಗಳು
ಬಾಳಿನ ಜೊತೆಗಿರಲಿ ಆ ಬೆಳದಿಂಗಳು ||
                                 ವಿದ್ಯಾಕುಮಾರಿ 9ಬಿ ತರಗತಿ

No comments: